Monday, 8 August 2011

Sri. Ananth Krishna Sharma - Veda Vandane : 2011

Sri. Ananth Krishna Sharma was born in 1924 in Krishnarajpet, Mandy district, Karnataka. He belongs to Gaargya gotra, Apastamba Sutra and Taittareya Yajur Shaka.  He studied Vedas till Kramantara in Nanjanagudu Shankara Mutt. Later, he pursued Ghana, Shrouta and Smartha Paatha in Mystore Maharaja Samskrita College, Mysore.  He taught as Pradyaapaka (Professor) for 29 years between 1955 - 1984 in Sri Chamarajendra Samskrita Patashaala.  Hundreds of students received expert teaching of Krishna Yajurveda from him during his service. After retiring, he continued teaching  Vedas at his home Paathashaala. Veda Shikshana Samithi offered an expression of gratitude towards Sri.Anantha Krishna Sharma and his contributions to Vedic education on Sunday, 7th Aug 2011.

ಶ್ರೀ. ಅನಂತ ಕೃಷ್ಣ ಶರ್ಮ ಅವರು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಯಲ್ಲಿ 1924 ರಲ್ಲಿ ಜನಿಸಿದರು. ಗಾರ್ಗ್ಯ ಗೋತ್ರಕ್ಕೆ ಸೇರಿದ ಇವರು ಆಪಸ್ತಂಬ ಸೂತ್ರದ ತೈತ್ತರೀಯ ಯಜುರ್ ಶಾಖಾಧ್ಯಾಯಿಗಳು. ಕ್ರಮಾಂತರದವರೆಗೆ ವೇದಾಧ್ಯಯನವನ್ನು ನಂಜನಗೂಡಿನ ಶಂಕರ ಮಠದಲ್ಲಿ ನಡೆಸಿ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಯನವನ್ನು ಮುಂದುವರೆಸಿದರು. ಘನ, ಶ್ರೌತ, ಮತ್ತು ಸ್ಮಾರ್ತ ಪಾಠಗಳಲ್ಲಿ ಪರಿಣಿತಿ ಪಡೆದು ಶ್ರೀ. ಜಯಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿದರು.  ಸುಮಾರು 29 ವರ್ಷಗಳ ಕಾಲ (1955 – 1984) ನೂರಾರು ವಿದ್ಯಾರ್ಥಿಗಳಿಗೆ ವೇದ ಮತ್ತಿತರ (ಮುಖ್ಯವಾಗಿ ಕೃಷ್ಣ ಯಜುರ್ವೇದ) ವಿಷಯಗಳನ್ನು ಕಲಿಸಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಿವೃತ್ತಿಯಾದ ನಂತರವೂ ಸಹ ಮನೆಯಲ್ಲೇ ವೇದ ಪಾಠಶಾಲೆ ನಡೆಸುತ್ತಾ ಹಲವಾರು ವಿದ್ಯಾರ್ಥಿಗಳಿಗೆ (ಸುಮಾರು 50 ಜನಕ್ಕೆ) ವೇದ ಪಠಣ ಕ್ರಮವನ್ನು ಕಲಿಸಿದವರು. ವೇದ ಶಿಕ್ಷಣ ಸಮಿತಿಯು ಶ್ರೀ. ಅನಂತ ಕೃಷ್ಣ ಶರ್ಮ ಅವರಿಗೆ ಶನಿವಾರ, 14ನೇ ಆಗಸ್ಟ್ 2010 ರಂದು ಕೃತಜ್ಞತೆಗಳನ್ನು ಸಲ್ಲಿಸಿತು.  

No comments:

Post a Comment