ವೇದ ಶಿಕ್ಷಣ ಸಮಿತಿಯ ಸದಸ್ಯರು ದಿನಾಂಕ ಗತಕಲಿ 5119 - ಶ್ರಾವಣ ಕೃಷ್ಣ ಷಷ್ಠಿಯ ಶನಿವಾರದಂದು (1ನೇ ಸೆಪ್ಟೆಂಬರ್ 2018) ಶ್ರೀ. ಸೋ.ತಿ.ನಾಗರಾಜ್ ಅವರನ್ನು ಭೇಟಿ ಮಾಡಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿತು.
ಶ್ರೀ. ಸೋ.ತಿ.ನಾಗರಾಜ್ (ಸೋಮಪುರ ತಿಪ್ಪಾಭಟ್ ನಾಗರಾಜ್) ಅವರು 21ನೇ ಜೂನ್ 1950 ರಂದು ಚಿಕ್ಕಮಗಳೂರು ತರೀಕೆರೆ ತಾಲೂಕಿನ ಸೋಮಪುರದಲ್ಲಿ ಜನಿಸಿದರು. ತಂದೆ ಶ್ರೀ. ತಿಪ್ಪಾಭಟ್ ಮತ್ತು ತಾಯಿ ಶ್ರೀಮತಿ. ಸರಸ್ವತಮ್ಮ. ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ನಂತರ ಶಾಸ್ತ್ರಾಧ್ಯಯನದ ಕಡೆಗೆ ಗಮನ. ತಿರುಪತಿ ಮತ್ತು ಕೇರಳದಲ್ಲಿ ನಡೆಯುವ ವ್ಯಾಕರಣ ಶಾಸ್ತ್ರದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಕೆ. ನಂತರದ ವರ್ಷಗಳಲ್ಲಿ ಕೃಷ್ಣ ಯಜುರ್ವೇದ, ಋಗ್ವೇದ, ವ್ಯಾಕರಣ ಶಾಸ್ತ್ರ ಮತ್ತು ವೇದಾಂತ ಶಾಸ್ತ್ರಗಳಲ್ಲಿ ಅಧ್ಯಯನ – ಪಾಂಡಿತ್ಯಗಳಿಕೆ. ಶ್ರೀ. ಸೋ.ತಿ. ನಾಗರಾಜ್ ಯಜುರ್ವೇದವನ್ನು ಶಿವಮೊಗ್ಗದ ವೇದಬ್ರಹ್ಮ ಶ್ರೀ. ಕೇಶವಮೂರ್ತಿ ಘನಪಾಠಿ, ಬೆಂಗಳೂರಿನಲ್ಲಿ ವೇದಬ್ರಹ್ಮ ಶ್ರೀ. ಅನಂತನಾರಾಯಣ ವಾದ್ಯಾರ್ ಮತ್ತು ವೇದಬ್ರಹ್ಮ ಶ್ರೀ. ಅನಂತಕೃಷ್ಣ ಘನಪಾಠಿ ಗಳ ಬಳಿಯಲ್ಲೂ, ಋಗ್ವೇದವನ್ನು ಬೆಂಗಳೂರಿನ ವೇದಬ್ರಹ್ಮ ಶ್ರೀ. ಕಳಸೇಶ್ವರ ಭಟ್ಟ ಅವರ ಬಳಿಯಲ್ಲೂ, ವ್ಯಾಕರಣ ಶಾಸ್ತ್ರವನ್ನು ಉಭಯವೇದಾಂತ ಪ್ರವೀಣ ಶ್ರೀ. ಎನ್.ಎಸ್. ತಿರುನಾರಾಯಣ ಅಯ್ಯಂಗಾರ್, ಉಭಯವೇದಾಂತ ಪ್ರವೀಣ ಶ್ರೀ.ಎಸ್.ಟಿ.ಶ್ರೀನಿವಾಸ ಆಯ್ಯಂಗಾರ್, ಮತ್ತು ಮಹಾಮಹೋಪಾಧ್ಯಾಯ ಶ್ರೀ. ಎನ್. ರಂಗನಾಥಶರ್ಮ, ವೇದಾಂತಶಾಸ್ತ್ರವನ್ನು ಪಂಡಿತಪ್ರವರ ಶ್ರೀ. ಕೃಷ್ಣ ಜೋಯಿಸ್ ಇವರುಗಳ ಬಳಿಯೂ ಕಲಿತರು.
ಶಾಸ್ತ್ರಾಧ್ಯಯನದ ನಂತರ ಶ್ರೀ. ಸೋ.ತಿ.ನಾಗರಾಜ್ ಅವರು ಪ್ರತಿಷ್ಠಿತ ಶ್ರೀ. ಚಾಮರಾಜೇಂದ್ರ ಸಂಸ್ಕೃತ ಮಹಾಕಾಲೇಜಿನಲ್ಲಿ ಶಿಕ್ಷಕರಾಗಿ ವೃತ್ತಿಗೆ ಸೇರಿ ಸುಮಾರು 33 ವರ್ಷಗಳಕಾಲ ವ್ಯಾಕರಣ ಶಾಸ್ತ್ರ ಪ್ರಾಧ್ಯಾಪನವನ್ನು ಮಾಡಿದರು. ತಮ್ಮ ಸೇವಾವಧಿಯಲ್ಲಿ ಸಂಸ್ಕೃತ, ವೇದಾಧ್ಯಯನ, ಶಾಸ್ತ್ರಾಧ್ಯಯನ ಇವುಗಳಲ್ಲಿ ಹಲವಾರು ರೀತಿಯಲ್ಲಿ ಅನುಪಮ ಕೊಡುಗೆ ಸಲ್ಲಿಸಿದರು. ಶೃಂಗೇರಿಯ ಗಣಪತಿ ವಾಕ್ಯಾರ್ಥ ಸಭೆ, ಶಿರಸಿ ಸ್ವರ್ಣವಲ್ಲಿ ಮಠದ ಶಾಸ್ತ್ರಗೋಷ್ಠಿ ಗಳಿಗೆ ಅಹ್ವಾನಿತರಾಗಿ ಭಾಗಿ. ಶೃಂಗೇರಿ ಮಠದಿಂದ ಸ್ವರ್ಣಾಂಗುಲಿಯಕ ಗೌರವ. ಮೈಸೂರಿನ ಅವಧೂತ ದತ್ತಪೀಠದಿಂದ ಶಾಸ್ತ್ರನಿಧಿ ಪ್ರಶಸ್ತಿ ಸ್ವೀಕಾರ. ಕೇಂದ್ರಸರ್ಕಾರದ ಮಹಾಮಹೋಪಧ್ಯಾಯ ಬಿರುದು. ಕೃಷ್ಣ ಯಜುರ್ವೇದದ ಸಾಯಣಭಾಷ್ಯದ ಕನ್ನಡ ಅವತರಣಿಕೆಯ ಪ್ರಧಾನ ಸಂಪಾದಕರಾಗಿ ಜವಾಬ್ದಾರಿ ನಿರ್ವಹಣೆ. ಹದಿನೈದು ಸಂಪುಟಗಳ ಶ್ರೀಧರ ವಚನಾಮೃತ ಧಾರೆ ಸರಣಿಗೆ ಮಾರ್ಗದರ್ಶಕರು. ಧಾತುರೂಪ ಪ್ರಕಾಶಿಕಾದ ಸಂಸ್ಕೃತದ ಆವೃತ್ತಿಗೆ ಪ್ರಕಾಶಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಣೆ. ವೇದಪಾರಾಯಣ ಸಂಪ್ರದಾಯದ ಬಲವರ್ಧನೆಗೆಂದು ವೇದಪಾರಾಯಣ ಪ್ರತಿಷ್ಠಾನದ ಸ್ಥಾಪನೆ. ವಾಲ್ಮೀಕಿ ರಾಮಾಯಣದ ಪ್ರಸರಣಕ್ಕೆಂದು ಶ್ರೀಮದ್ ವಾಲ್ಮೀಕಿ ರಾಮಾಯಣ ಪ್ರಸರಣ ಪರಿಷತ್ ಸ್ಥಾಪನೆ. ಸಂಸ್ಕೃತ ಭಾರತಿಯ ಮೂಲಕ ಸಂಸ್ಕೃತ ಪ್ರಚಾರ.
ನಿವೃತ್ತಿಯ ನಂತರ ಸ್ವಂತ ಸೋಮಪುರದಲ್ಲಿ ದತ್ತ ಪೀಠ ಸ್ಥಾಪಿಸಿ ತಮ್ಮ ಎಲ್ಲಾ ಕಾರ್ಯಚಟುವಟಿಕೆಗಳ ಮುಂದುವರಿಕೆ. ಸಂಸ್ಕೃತ, ಸಂಸ್ಕೃತಿ, ಶಾಸ್ತ್ರಗಳ ಚಟುವಟಿಕೆಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ.
ವೇದ ಶಿಕ್ಷಣ ಸಮಿತಿಯು ಕಳೆದ ಎಂಟು ವರ್ಷಗಳಲ್ಲಿ ಭೇಟಿಮಾಡಿದ ವೇದ ಪಂಡಿತರು
ಶ್ರೀ. ಶಿವರಾಮ ಶಾಸ್ತ್ರಿ (2011)
ಶ್ರೀ. ಅನಂತ ಕೃಷ್ಣ ಶರ್ಮ (2012)
ಶ್ರೀ. ಶ್ಯಾಮ ಭಟ್ಟ (2013)
ಶ್ರೀ. ಶ್ರೀನಿವಾಸ ಶರ್ಮ (2014)
ಶ್ರೀ. ಗೋವಿಂದ ಪ್ರಕಾಶ ಭಟ್ಟ (2015)
ಶ್ರೀ. ಅನಂತ ನಾರಾಯಣ ವಾದ್ಯಾರ್ (2016)
ಶ್ರೀ. ರವಿಕುಮಾರ್ (2017)
ಶ್ರೀ. ಸೋ.ತಿ. ನಾಗರಾಜ (2018)
Members of Veda Shikshana Samithi met Sri. So. Ti. Nagaraj on Saturday, Shravana Krishna Shasti, 5119- 1st September 2018 as an expression of gratitude towards his contribution to Vedic Education.
Sri. So.Ti. Nagaraj (Somapura Thippa Bhat Nagaraj) was born on 21st June 1950 in Somapura of Tarikere Taluk of Chikamagalur district with father Sri. Thippa Bhat and mother Smt. Saraswathmma. After SSLC education, Sri. Nagaraj turned towards traditional education and in a short time secured gold medal for vAkpratiyOgitaa competition in vyAkaraNa shAstra that was conducted in Tirupati and Kerala. Further, Sri. So. Ti. Nagaraj was continued Vedic studies and mastered Krishna Yajur Veda, Rig Veda, and Vyakarana Shastra. He studied Yajur Veda with veda brahma Sri. Keshavamurthi ghanapAthi of Shivamoga, veda brahma Sri. Ananthanarayana Vadyar of Bangalore and vEda brahma Sri. Ananthakrishna Ghanapathi of Bangalore. Sri. Nagaraj studied Rig Veda study with vEda brahma Sri. Kalaseshwara Bhatta of Bangalore and Vyakarana Shastra with ubhayavEdAnta praveeNa Sri. N. S. Tirunarayana Iyengarya, ubhayavEdAnta praveeNa Sri. S.T. Srinivasa Ayengarya, and mahAmahOpadhYaya N. Ranganatha Sharma. Further, pandita pravara Sri. Krishna Jois trained Sri. So. Ti. Nagaraj in vEdAntha shAstra.
After Vedic studies, Sri. So. Ti. Nagaraj took up teaching in prestigious Sri. Chamarajendra Samskruta College and served 33 years in teaching vYAkaraNa shAstra. Sri. So. Ti. Nagaraj was invited to Ganapathi Vakyartha Sabhe at Sringeri, Shastragoshti at Shirasi Svarnavalli and has received Svarnanguliyaka honor from Sringeri Swamiji and Shastranidhi award from Avadhoota Dattapeeta of Mysore. Sri. So. Ti. Nagaraja has also received mahamahOpaDhyAaya title from central government. Sri. So. Ti. Nagaraj is acting as chief editor for Kannada version of Sayanabhashya of Krishna Yajurveda. He has guided publication of 15 volumes of Sridhara vachanamrutha Dhare series and served as publication director for publishing Sanskrit version of Dhaturoopa prakashika. He established Vedaparayana Pratishtana at Bangalore for strengthening Vedaparayana tradition. He also established Srimad Valmiki Ramayana Prasarana Parishat for popularizing Sri Valmiki Ramayana in the state of Karnataka. He has served and helped Samksrita Bharati in promoting Samskrita language.
Veda Shikshana Samithi is meeting eminent people annually who have contributed significantly to the Vedic education. The following are Samskrit scholars who have interacted with us:
Sri. Shivarama Sastry (2011)
Sri. Ananta Krishna Sharma (2012)
Sri. Shyama Bhatta (2013)
Sri. Srinivasa Sharma (2014)
Sri. Govinda Prakash Bhatta (2015)
Sri. Ananta Narayana Vadyar (2016)
Sri. Ravikumar (2017)
Sri. So. Ti. Nagaraja (2018)
Banian Waste, Yarn Waste, white cotton waste available here https://www.cleanindustry.in/
ReplyDelete