ವೇದ ವಿದ್ವಾನ್ ಅಮೈ ಅನಂತಕೃಷ್ಣ ಭಟ್ಟ ಅವರು ೧೯೬೪ ರ ಕ್ರೋಧಿ ನಾಮ ಸಂವತ್ಸರದಲ್ಲಿ (ಜುಲೈ ೦೭) ರಂದು ಜನಿಸಿದರು. ಶ್ರೀಮತಿ ಲಲಿತಾ ಮತ್ತು ಅಮೈ ನಾರಾಯಣ ಭಟ್ಟರ ಪುತ್ರರು. ಸುಮಾರು ೧೬ನೇ ವಯಸ್ಸಿನಿಂದ ವೇದಾಧ್ಯಯನವನ್ನು ಪ್ರಾರಂಭಿಸಿದ ಇವರು ವರದಹಳ್ಳಿಯಲ್ಲಿ ೬ ವರ್ಷಗಳ ಕಾಲ ಮೂಲಾಂತ ಅಧ್ಯಯನವನ್ನು ನಡೆಸಿದರು. ಬೋಧಾಯನ ಸೂತ್ರ ಪ್ರಯೋಗ, ಸಂಸ್ಕೃತ, ಕಾವ್ಯಗಳ ಜೊತೆಗೆ ಕೃಷ್ಣಯುಜು ಶಾಖೆಯ ಅಧ್ಯಯನವನ್ನು ಪೂರ್ಣಗೊಳಿಸಿದರು. ನಂತರ ಮೈಸೂರಿನ ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಕ್ರಮಾಂತ ಮತ್ತು ಘನಾಂತಗಳನ್ನು ಸುಮಾರು ೮ ವರ್ಷಗಳವರೆಗೆ ಅಧ್ಯಯನ ಮಾಡಿದರು. ಪೂರ್ವಮೀಮಾಂಸೆಯ ಅಧ್ಯಯನವೂ ಜೊತೆಯಲ್ಲಿ ನಡೆಯಿತು. ಈ ಅವಧಿಯಲ್ಲೇ ಸಂಸ್ಕೃತ ಎಂ.ಎ ಪದವಿಯನ್ನೂ ಪೂರ್ಣಗೊಳಿಸಿದರು. ಮೊದಲ ಆರು ತಿಂಗಳು ವಾರಾನ್ನ ಮಾಡುತ್ತಾ ನಂತರದಲ್ಲಿ ಅಧ್ಯಾಪನೆಯ ಜೊತೆಯಲ್ಲಿ ಅಧ್ಯಯನವನ್ನು ನಡೆಸಿದರು. ನಂತರದಲ್ಲಿ ಹೊಸಪೇಟೆಯ ವಿದ್ಯಾರಣ್ಯ ವಿದ್ಯಾಪೀಠದಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಾಪನವನ್ನು ಮಾಡಿ ನಂತರದಲ್ಲಿ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯ (ಇಂದಿನ ಕರ್ನಾಟಕ ಸಂಸ್ಕೃತ್ ವಿಶ್ವವಿದ್ಯಾಲಯ)ದಲ್ಲಿ ೨೭ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಅಧ್ಯಾಪನವನ್ನು ಮಾಡಿ ನಿವೃತ್ತರಾದರು. ವೇದ ವಿದ್ವಾನ್ ಅಮೈ ಅನಂತಕೃಷ್ಣ ಭಟ್ಟ ಆವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ವೇದ ಶಿಕ್ಷಣ ಸಮಿತಿಯ ಸದಸ್ಯರು ವೇದ ವಿದ್ವಾನ್ ಅಮೈ ಅನಂತಕೃಷ್ಣ ಭಟ್ಟ ಅವರನ್ನು ೨೪ನೇ ಆಗಸ್ಟ್ ೨೦೨೫ ರಂದು ಭೇಟಿ ಮಾಡಿದರು.
Friday, 29 August 2025
Sri. Amai Ananthakrishna Bhatta - Meeting with Veda Vidwan
Veda Vidwan Amai Ananthakrishna Bhatta was born on July 07, 1964 (Krodhi samvatsara). His parents are smt. Lalitha and Sri. Amai Naayayana Bhatta. Sri. Amai Ananthakrishna Bhatta started his Vedic education at the age of 16 years. He studied Krishna Yajurveda for six years in Varadahalli. He learnt Bodhayana Sutra prayoga, Sanskrit, and Kavya. After completing moolanta of Krishna Yajurveda, he joined Maharaja Samskrita Mahavidyalaya of Mysore and continued study of kramanta and ghananta. In eight years of study, along with completing ghananta, he also studied purva mimamsa, and M.A in Sanskrit language. During first six months of study in Mysore, he sustained through varanna (weekly food arrangement with households). He was also teaching Veda to other students. After completing study, he joined Vidyaranya Vidyapeeta of Hosapet and worked for four years. Later he joined Sri Jayachamarajendra Samskrita Mahavidyalaya (now Karnataka Samskrita Vishvavidyalaya) and served as a faculty for 27 years. He has authored several books and continue to teach students. Members of Veda Shikshana Samithi met Veda Vidwan Amai Ananthakrishna Bhatta on 24th August 2025.
No comments:
Post a Comment