Monday, 20 July 2020

ತೈತ್ತರೀಯ ಸಂಹಿತಾ - ಕಾಂಡ -೧ ಪ್ರಶ್ನೆ -೧/೨ - ಅನುವಾದ

ವತ್ಸಾಪಾಕರಣ ಮಂತ್ರಗಳು (ಕರುಗಳನ್ನು ಬೇರ್ಪಡಿಸುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 1)

1.       ಅನ್ನಕ್ಕಾಗಿ ನಿನ್ನನ್ನು ಮತ್ತು ದೇವ ಬಲಪ್ರದವಾದ ರಸಕ್ಕಾಗಿ, (ಪಲಾಶ ಶಾಖೆಯೇ, ನಿನ್ನನ್ನು ನಾನು ಕತ್ತರಿಸುತ್ತೇನೆ)

2.     (ಕರುಗಳೇ) ವಾಯುಗಳಾಗಿ ಹೋಗುವಿರಿ, ಹಿಂದಿರುಗಿ ಬರುವಿರಿ (ಮನೆಯಿಂದ ಹುಲ್ಲುಗಾವಲಿಗೆ ಮತ್ತು ಪುನಃ ಯಜಮಾನನ ಮನೆಗೆ ತಾಯಿಯ ಬಳಿಗೆ)

3.     ಸವಿತಾ ದೇವತೆಯು ನಿಮ್ಮನ್ನು ಶ್ರೇಷ್ಠತರವಾದ ಕರ್ಮಕ್ಕಾಗಿ ಪ್ರೇರೇಪಿಸಲಿ. ಹಿಂಸೆಗೆ ಅರ್ಹವಲ್ಲದವುಗಳೇ, ದೇವಭಾಗವನ್ನು ಬಲಯುತಗೊಳಿಸಿ ವೃದ್ಧಿಮಾಡಿ

4.     ಕ್ಷೀರಭರಿತವಾದ, ಕರುಗಳುಳ್ಳ, ಕ್ರಿಮಿಗಳಿಲ್ಲದ, ವ್ಯಾಧಿರಹಿತವಾದ ನೀವು ಕಳ್ಳನಿಗಾಗಲೀ, ಭಕ್ಷಣೆಗಾಗಲೀ ವಶವಾಗದಿರಿ,   ರುದ್ರನ ಆಯುಧವೂ ನಿಮ್ಮನ್ನು ತ್ಯಜಿಸಲಿ. 

5.       (ಗೋವುಗಳು) ಸ್ಥಿರವಾಗಿ ಈ ಗೋಪತಿಯಲ್ಲಿ ಬಹುವಾಗಿ ನಿಲ್ಲಲಿ. (ಪಲಾಶ ಶಾಖೆಯು) ಯಜಮಾನನ ಪಶುಗಳನ್ನು ರಕ್ಷಿಸಲಿ.  

 ಬರ್ಹಿರಾಹರಣ (ದರ್ಭೆಯನ್ನು ತರುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 2)

1.      (ಅಗ್ನಿಯೇ) ಯಜ್ಞದ ಧನವಾಗಿರುವೆ. (ಯಜ್ಞವಿಘ್ನಕಾರಕ ಮತ್ತು ಕೊಯ್ಯುವ ಸಾಧನದಲ್ಲಿರುವ) ರಕ್ಷಸ್ಸು ದಹನವಾಗಲಿ

2.     (ಯಜ್ಞದ) ಶತೃಗಳು ದಹನವಾಗಲಿ. ಮನುವಿನಿಂದ ಮಾಡಿದ ಇದು (ಕೊಯ್ಯುವ ಸಾ ;lಧನ) ಬರ್ಹಿಯನ್ನು ಹೊಂದಲು ಪೂರ್ವ ದಿಕ್ಕಿಗೆ ಹೋಗುತ್ತದೆ,  

3.     ಅನ್ನದಿಂದ ತೀಕ್ಷ್ಣವಾಗಿರುವ, ದೇವತೆಗಳಿಗೆ ಪ್ರಿಯವಾದ, ಇಲ್ಲಿ ಹರಡಬೇಕಾಗಿರುವ ಬರ್ಹಿಸ್ಸನ್ನು ಆ ಕವಿಗಳು ಪೂರ್ವದಿಕ್ಕಿನಿಂದ ತರುತ್ತಿದ್ದರು.  

4.     ದೇವತೆಗಳಿಗಾಗಿ ಸ್ವೀಕರಿಸಲ್ಪಟ್ಟ ಮತ್ತು ಮಳೆಯಿಂದ ಪುನಃ ಬೆಳೆಯುವವನೂ ಆಗಿರುವೆ.

5.      ದೇವಬರ್ಹಿಯೇ (ದರ್ಭೆಯೇ), ನಿನ್ನನ್ನು ಕತ್ತರಿಸಿದರೂ, ಉದ್ದವಾಗಿ ಮತ್ತು ಅಡ್ಡವಾಗಿ (ಸೀಳು) ಮಾಡದೇ ಗಿಣ್ಣನ್ನು ಉಳಿಸುವೆ. ಹಿಂಸಿಸದಿರುವ ದೇವಬರ್ಹಿಯು ಸೂರಾರು ಶಾಖೆಗಳಾಗಿ ಟಿಸಿಲಾಗಲಿ. ನಾವು ಸಹಸ್ರ ಟಿಸಿಲುಗಳಾಗಿ ವೃದ್ಧಿಯಾಗೋಣ.k

6.     (ಬರ್ಹಿಯನ್ನು) ಭೂಮಿಯ ಸಂಪರ್ಕದ ದೆಸೆಯಿಂದ ಕಾಪಾಡು. ಆದಿತ್ಯನ ಮೇಖಲೆಯಂತಿರುವ,  ಒಟ್ಟುಗೂಡಿಸಿಕೊಳ್ಳುವ ಸಾಮರ್ಥ್ಯವಿರುವ ನಿನ್ನನ್ನು, ಇಂದ್ರಾಣಿಯು ಮಾಡಿದ ಬಂಧನದಂತೆ, ಸೇರಿಸುತ್ತೇನೆ. ಪೂಷನು ನಿನ್ನ ಗ್ರಂಥಿಯನ್ನು ಕಟ್ಟಲಿ. ನಿನ್ನ ಆ (ಗಂಟು ಬಹಳ ಸಮಯ) ನಿಲ್ಲದಿರಲಿ.

7.      ನಿನ್ನನ್ನು ಇಂದ್ರನ ಬಾಹುಗಳಿಂದ ಮೇಲಕ್ಕೆ ಎತ್ತುತ್ತೇನೆ. ಬೃಹಸ್ಪತಿಯ ತಲೆಯಿಂದ ಹೊರತ್ತೇನೆ. ವಿಸ್ತೀರ್ಣವಾದ ಆಕಾಶವನ್ನು ಅನುಸರಿಸಿ ಬಾ

8.     ದೇವತೆಗಳನ್ನು ಹೊಂದುವೆ.  (ಗಾರ್ಹಪತ್ಯದ ಉತ್ತರದ ಮೇಲುಭಾಗದಲ್ಲಿ ದರ್ಭೆಯನ್ನಿಡಲು)

ದೋಹನ (ಹಾಲು ಕರೆಯುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 3)

ದೇವಯಜ್ಞ ರೂಪವಾದ ದೇವ ಕರ್ಮಗಳಿಗಾಗಿ (ಪಾತ್ರೆಗಳೇ) ಶುದ್ಧವಾಗಿರಿ. ವಾಯುವಿಗೆ ಅವಕಾಶವನ್ನು ನೀಡುವ ಕುಂಭವೇ  ನೀನು ದ್ಯು ಲೋಕವೂ, ಭೂಮಿಯೂ, ವೃಷಿರೂಪನೂ ಆಗಿದೆ.  ಒಡೆಯದೇ ಧೃಡವಾಗಿರು. (ಶಾಖಾ ಪವಿತ್ರವೇ) (ಕ್ಷೀರರೂಪವಾದ) ವಸುಗಳನ್ನು -  ಶತ/ಸಹಸ್ರ ಧಾರೆಯಾಗಿ ಬೀಳುವ ವಸುಗಳನ್ನು ಪವಿತ್ರಗೊಳಿಸುವವನಾಗಿದ್ದೀಯೆ. ಸಣ್ಣ ಮತ್ತು ದೊಡ್ಡ ಹನಿಗಳು ನಾಕ ಎಂಬ ಅಗ್ನಿಗೆ ಹುತವಾಗಲಿ. ದ್ಯಾವಾಪೃಥಿವಿಗಳಿಗೆ ಸ್ವಾಹಾ (ಹುತವಾಗಲಿ).   ಆ ಧೇನುವು ಭೂರೂಪಿಯೂ, ಅಂತರಿಕ್ಷರೂಪಿಯೂ ಮತ್ತು ದ್ಯೌ ರೂಪಿಯೂ ಆಗಿದೆ.   ಅಲೆಗಳುಳ್ಳ, ಹರ್ಷದಾಯಕವಾದ, ಮಧುರವಾಗಿರುವಾ ಋತಾವರಿಯೇ,  ಧನದ ಲಾಭಕ್ಕಾಗಿ ಸೇರಿರಿ.  ಸೋಮನಿಂದ ನಿನ್ನನ್ನು ಹೆಪ್ಪು ಹಾಕುತ್ತೇನೆ.  ದಧಿಯಿಂದ  ಇಂದ್ರನಿಗೆ ಹೋಮ ಮಾಡಲಾಗುತ್ತದೆ.  ಹವ್ಯವನ್ನು ವಿಷ್ಣುವೇ ರಕ್ಷಿಸು.  

ಪ್ರಾಣನಿವಾಸ ಕಾರಣವಾದ ಕ್ಷೀರ ರೂಪವನ್ನು - ವಸು ಎಂಬ ಪದ ಸೂಚಿಸುತ್ತದೆ. ಸ್ವಾಹಾ ಎನ್ನುವುದಕ್ಕೆ 'ಹುತವಾಗಲಿ' ಎಂಬ ಅರ್ಥವಿದೆ.  ಧೇನುವನ್ನು (ವಿಶ್ವಯುಃ, ವಿಶ್ವವ್ಯಾಚಾಃ, ಮತ್ತು ವಿಶ್ವಕರ್ಮಾ) ಎಂಬ ಪದಗಳಿಂದ ಪ್ರಶಂಸಿಸಲಾಗಿದೆ.  ಜಲವನ್ನು ಋತಾವರಿ ಎಂದು ಹೇಳಲಾಗಿದೆ.  ಪಾತ್ರೆಗಳನ್ನು ಧನ ಎನ್ನಲಾಗಿದೆ.  ದೇವರಿಗೆ ಹೋಮಾರ್ಥ ಪದಾರ್ಥಗಳನ್ನು ಹವ್ಯ ಎನ್ನಲಾಗಿದೆ.  

ಹವಿರ್ನಿರ್ವಾಪ (ಧಾನ್ಯವನ್ನು ಯಜ್ಞಪಾತ್ರೆಗೆ ಬದಲಾಯಿಸಿಕೊಳ್ಳುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 4)

ತೊಳೆದಿರುವ ಕೈಗಳಿಂದ, ತೆಗೆದುಕೊಳ್ಳುವ ಮೊರದಲ್ಲಿ ಇರುವ ರಕ್ಷಸ್ಸು ಸುಡಲಿ.  (ಧುರ್ಯಾಗ್ನಿ ಎಂಬ) ಅಗ್ನಿಗೆ ತೊಂದರೆಗಳನ್ನು ನಾಶಪಡಿಸಲು ಪ್ರಾರ್ಥನೆ.  ಹವ್ಯವನ್ನು ಹೊರುವ ಶಕಟವು ಧೃಡವಾಗಿರಲಿ.  (ಧಾನ್ಯಕ್ಕೆ) ಭಯದಿಂದ ನಡುಗಬೇಡ.  ಧಾನ್ಯವನ್ನು ವಾಯುವಿಗೆ ತೆರೆಯುತ್ತೇನೆ. ಅಶ್ವಿನಿಯ ತೋಳುಗಳಿಂದಲೂ ಮತ್ತು ಪೂಷದೇವನ ಕೈಗಳಿಂದಲೂ ಮೊರದಲ್ಲಿ ಆಗ್ನೀಶೋಮರಿಗಾಗಿ ಪ್ರತ್ಯೇಕಿಸುತ್ತೇನೆ.  ಆಹವನೀಯಾಗ್ನಿಯೇ, ನಮ್ಮ ಮನೆಗಳನ್ನೂ, ಹವ್ಯವನ್ನೂ ರಕ್ಷಿಸು. 


ಅವಘಾತ (ಕುಟ್ಟುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 5)

ಸವಿತಾ ದೇವನು (ಪ್ರೋಕ್ಷಣೀ ಜಲವಾದ) ನಿಮ್ಮನ್ನು ಶುದ್ಧಿಗೊಳಿಸಲಿ. ರಂಧ್ರವಿಲ್ಲದ, ಸೂರ್ಯ ರಶ್ಮಿಗಳಂತಿರುವ ಪವಿತ್ರದಿಂದ (ಧರ್ಭೆಗಳಿಂದ) ಶುದ್ಧಿಗೊಳಿಸಲಿ.  ಜಲವು ಈ ಯಜ್ಞವು ನಿರ್ವಿಘ್ನವಾಗಿ ಸಮಾಪ್ತಿಯಾಗಲಿ.  (ಜಲದೇವಿಯಾಗಿರುವ) ನಿಮ್ಮನ್ನು ಇಂದ್ರನು ಮತ್ತು ನೀವು ಇಂದ್ರನನ್ನು ವೃತ್ರವಧೆಯಲ್ಲಿ ಆರಿಸಿಕೊಂಡಿರಿ.  ನಿಮ್ಮಿಂದ ಬೇರೆ ವಸ್ತುಗಳೂ ಶುದ್ಧವಾಗುತ್ತವೆ.  ಭೂದೇವಿಯ ಚರ್ಮದಂತಿರುವ ಕೃಷ್ಣಾಜಿನವನ್ನು ಭೂಮಿಯು ಪ್ರತಿಗ್ರಹಿಸಲಿ.  ಒರಳು ಮತ್ತು ಒನಕೆ ಗಳಿಂದ ಧಾನ್ಯವನ್ನು ಸಂಸ್ಕರಿಸಿ, ಹೊಟ್ಟಿನಿಂದ ರಾಕ್ಷಸರನ್ನು ದೂರಮಾಡಿ, ನುಚ್ಚಿನಿಂದ ಬೇರ್ಪಡಿಸಿ  ತಂಡುಲವನ್ನು ಸವಿತೃದೇವನು ಸ್ವೀಕರಿಸಲಿ.  

ತಂಡುಲಪೇಷಣ (ಅಕ್ಕಿಯನ್ನು ಕುಟ್ಟುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 6)

ಕಪಾಲೋಪಧಾನ (ಕಪಾಲಗಳನ್ನು ಇಡುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 7)

ಪುರೋಡಾಶನಿಷ್ಪಾದನ (ಪುರೋಡಾಶವನ್ನು ತಯಾರಿಸುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 8)

ವೇದಿಕರಣ (ವೇದಿಯನ್ನು ನಿರ್ಮಿಸುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 9)

ಆಜ್ಯಗ್ರಹಣ (ತುಪ್ಪವನ್ನು ತೆಗೆದುಕೊಳ್ಳುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 10)

ಇಧ್ಮಸಂನಹನ, ಬರ್ಹಿರಾಸ್ತರಣ (ದರ್ಭೆಯನ್ನು ತರುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 11)

ಆಘಾರ (ಅಜ್ಯಧಾರೆಯ ಅರ್ಪಣ) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 12)

ಸ್ರುಗ್ವೂಹನ (ಸ್ರಕ್ ಗಳನ್ನು ಇಡುವುದು) (ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 13)

(ತೈತ್ತರೀಯ ಸಂಹಿತಾ – ಪ್ರಥಮ ಕಾಂಡ ಪ್ರಥಮ ಪ್ರಶ್ನೆ – ಅನುವಾಕ 14)


No comments:

Post a Comment